ನಸುಗಾರ ಕಲಾಂ

ನಿಜಾಂ ಆಸ್ಪತ್ರೆಗೆ ಭೇಟಿ ಇಟ್ಟು ,

ರೋಗಿಗಳ ವೇದನೆ ಕಂಡ ವಿಜ್ಞಾನಿ ,

ಮೂರೇವಾರದ ಸತತ ಶ್ರಮದಲಿ .

ಮೂರೂಕಿಲೋಗ್ರಾ೦ ಕ್ಯಾಲಿಪರ್ ಆಯಿತು ಬರೀ ಮುನ್ನೂರು ಗ್ರಾಂ !

ರೋಗಿಗಳ ಕಣ್ಣಲಿ ಹೊರಟಿತು ಆನಂದ

ತುಂಬಿ ಬಂದಿತು ವೈದ್ಯರ ಹೃದಯ

ಇಂತಹ ವಿಜ್ಞಾನಿ ಯಾರು ಗೊತ್ತೇ ?

ಅವರೇ, ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿ ಅಬ್ಧುಲ್ ಕಲಾಂ !

ಹಾರುವ ಹಕ್ಕಿಗಳ ಕಂಡನು ಬಾಲಕನು

ತಾನೂ ಹಾರುವ ಕನಸನು ಕಂಡನು

ಈ ಕನಸುಗಾರನೇ ಶ್ರೇಷ್ಠ ವಿಜ್ಞಾನಿ ಯಾದನು

ರಾಕೆಟ್,ಕ್ಷಿಪಣಿ ,ತಂತ್ರಜ್ಞಾನ ಕ್ಷೇತ್ರದಲಿ ಗಗನದೆತ್ತರಕ್ಕೇರಿಸಿದ ಭಾರತವನು !

ಅಗ್ನಿಯ ರೆಕ್ಕೆ ಗಗಳ ಹೆಸರಲಿ

ಬರೆದನು ತನ್ನಯ ಆತ್ಮ ಕಥನದಲಿ

ಇಂದಿನ ಮಕ್ಕಳಿಗೆ ಹೇಳುವ ಗುಟ್ಟು

“ಮಕ್ಕಳೇ ಕನಸು ಕಾಣಿರಿ” ಕನಸುಗಳೇ ಆಲೋಚನೆಗಳು,ಕೃತಿ ಆಲೋಚನೆಗಳ ಫಲ !

ಪದ್ಮ ಭೂಷಣ ,ಪದ್ಮವಿಭೂಷಣ ,ಭಾರತ ರತ್ನ

ಕಲಾ೦ ನ ಸಾಧನೆ ಹಲವಾರು,

ಮರೆಯಾದ ಕಲಾಂ ಜನ್ಮದಿನವನು

ವಿಶ್ವ ಸಂಸ್ಥೆ ಘೋಷಣೆ ಮಾಡಿತು , ವಿಶ್ವ ವಿದ್ಯಾರ್ಥಿ ದಿನವ !

ಅಧ್ಬುತ ಕಲಗಾರ ! ಅಬ್ಧುಲ್ ಕಲಾಂಗೆ !

ಮಕ್ಕಳ ಪ್ರೀತಿಯ ವಿಜ್ಞಾನಿ ಗೆ !

ಅಲ್ಪೈನೆ ಶಾಲೆಯ ಮಕ್ಕಳ

ನಮನ ,ನಮನ, ಹೃದಯ ಪೂರ್ವಕ ನಮನ!

ಪದ್ಮಕ್ಷಿ .ಎಸ್

ಕನ್ನಡ ಪ್ರಾದ್ಯಾಪಕಿ .

 

Leave a Reply